Nintide Maleyu歌词由Pratibha Kulkarni演唱,出自专辑《Nintide Maleyu》,下面是《Nintide Maleyu》完整版歌词!
Nintide Maleyu歌词完整版
ನಿಂತಿದೆ ಮಳೆಯು, ಕರಗಿದೆ ಮುಗಿಲು
ಎಂತಹ ಚೆಲುವಿನ ಆಕಾಶ!
ಕಂತುವ ಮೊದಲೆ ಕಡಲಲಿ ಭಾನು
ಸಂತಸಪಡಲಿದೆ ಅವಕಾಶ.
ಸಂಜೆಯ ಗಡಿಗೆ ಉರುಳುತ ಚೆಲ್ಲಿ
ಬಾನಿನ ತುಂಬಾ ಕೆಂಬಣ್ಣ.
ರಂಜಿಸುತಿಹುದು ನಡುವಲಿ ತೂರಿ
ಬಿಸಿಲಿನ ಕೋಲಿನ ಹೊಂಬಣ್ಣ.
ಗಿಡ ಮರ ಬಳ್ಳಿ ಎಲೆಎಲೆಗಳಿಗೆ
ನಡೆದಿದೆ ರಂಗಿನ ಜಳಜಳಕ.
ಕಡಲಿನ ನದಿಯ ಕೆರೆಗಳ ಮೈಗೆ
ಉಡಿಸಿದೆ ಚಿನ್ನದ ಪುಳಪುಳಕ.
ಜಾರುವ ಮುನ್ನ ಸೊಬಗಿನ ಸಮಯ
ನೋಡುತ ಹಿಗ್ಗುವ ಕಣ್ತುಂಬ
ಹೀರುವ ಬನ್ನಿ ಸೊಗಸಿನ ಪೇಯ
ಬಾಡುವ ಮೊದಲೇ ರವಿಬಿಂಬ.