Bhavave Hogi Baa歌词由Joe Costa&Ramenahalli Jagannatha&Siddhartha Belmannu演唱,出自专辑《Hondisi Bareyiri (Original Motion Picture Soundtrack)》,下面是《Bhavave Hogi Baa》完整版歌词!
Bhavave Hogi Baa歌词完整版
ಭಾವವೇ ಹೋಗಿ ಬಾ…(Male)
ಭಾವವೇ ಹೋಗಿ ಬಾ..ಖುಷಿಯಲಿ..
ಇಹಕೂ, ಪರಕೂ, ಮೊದಲ ಪ್ರೇಮ ನೀ..
ದಾರಿಯ ನಡುವಲಿ ಉಳಿದೆ ನೀ..
ನೆನಪಿನ ನೆಪದಲಿ..
ಜೀವದ ಭಾವದೊಡಲಿಗೆ ಏಕಾಂಗಿ ನಾ
ಸಾಗುತಿರು ಈ ಹಾದಿಯಲ್ಲಿ ನೀ ಹಸಿರಾಗಿ…
ಭಾವವೇ ಹೋಗಿ ಬಾ..ಖುಷಿಯಲಿ..
ಇಹಕೂ, ಪರಕೂ, ಮೊದಲ ಪ್ರೇಮ ನೀ..
ಸರಿ ನಾನು ಸರಿ ನಾನು
ಎಂಬ ಅಪಸ್ವರದ ನೆರಳಿನಲಿ..
ಬದುಕಿನ ಸ್ವರ ನರಳಿದೆ..
ಹೊಂದಿಸದೆ ಬದುಕದಿರೆ,
ಬಾಳಿನ ದಾರಿಯಲಿ
ಇರುಳಿನ ಛಾಯೆಯ ಬಿಂಬವೂ ಮೂಡಿದೆ…
ಪ್ರೇಮವೇ ಮೂಡಿ ಬಾ ಇವರಲಿ
ಮಾತಿಗೂ ಮೌನಕೂ ಸಿಗದ ಮಾಯೆ ನೀ.
ಸಂತೆಯಲ್ಲಿ ಸಾಗುತಿರೋ ಜೀವಗಳ
ಹುಡುಕಾಟದೀ…
ಕಳೆದುಹೋದ ಮುಖಗಳ ಮೌನದಲಿ
ಇರುವಂತ ಈ…
ನಗುವು,
ನಟನೆಯೋ..
ಸಹಜವೋ..?
ಅರಿಯದಾಯಿತೆ..
ಅರಿತು ,ಮರೆತು,ಕಲೆತು ಬೆರೆಯುವ..
ಭಾವವೇ ಹೋಗಿ ಬಾ, ಖುಷಿಯಲಿ..
ಇಹಕೂ ಪರಕೂ ಮೊದಲ ಪ್ರೇಮ ನೀ..