Neene歌词由Vishwajeet Deshpande&Krishnamurthy Kiitty&Riyaz MN演唱,出自专辑《Neene》,下面是《Neene》完整版歌词!
Neene歌词完整版
ಓ ಹೃದಯವೇ ನಿನ್ನೊಂದಿಗೆ
ನಾ ಹೇಳದ ಮಾತೊಂದಿದೆ
ನೀ ಒಲವಿನ ಆಕರ್ಷಣೆ
ಮನ ಬಯಸಿದೆ ಬರಿ ನಿನ್ನನೆ
ಆ ಕಂಗಳೇ ಸಿಹಿಕಾಗದ
ಪದವಿಲ್ಲದೆ ಹಾಡಾಗಿದೆ
ನಿನ್ನೆಲ್ಲಾ ಭಾವಗಳ ಕಾವಲು ಕಾಯುವೆ
ನಾ ನಡೆಯೋ ಹಾದಿಯಲಿ ಬರಿ ನಿನ್ನದೆ ಗುರುತಿದೆ
ಕಣ್ಣೆದುರೇ ನೀನಿರು ಕೈ ಜಾರದೆ...
ನೀನೇ ನೀನೇ ಕನಸೆಲ್ಲಾ ನೀನೇ
ನೀನೇ ನೀನೇ ಕ್ಷಣವೆಲ್ಲಾ ನೀನೇ
ನೀನೇ ನೀನೇ ನನ್ನ ಜಗವೇ ನೀನೇ
ನೀನೇ ನೀನೇ ನನ್ನ ಉಸಿರು ನೀನೇ
ಕಣ್ಣಲ್ಲೇ ಕೂತಿರುವೆ ನನ್ನಲ್ಲೇ ಅವಿತಿರುವೆ
ನೀ ಅರ್ಥ ನನ್ನ ಪ್ರೇಮಕೆ
ನೀನಾಡೋ ಪಿಸುಮಾತು ಸವಿಜೇನ ಕನವರಿಕೆ
ಈ ಹೃದಯಾ ನಿನಗೇ ಕಾಣಿಕೆ...
ಓ ಹೃದಯವೇ ನಿನ್ನೊಂದಿಗೆ
ನಾ ಹೇಳದ ಮಾತೊಂದಿದೆ
ನೀನೇ ನೀನೇ ಕನಸೆಲ್ಲಾ ನೀನೇ
ನೀನೇ ನೀನೇ ಕ್ಷಣವೆಲ್ಲಾ ನೀನೇ
ನೀನೇ ನೀನೇ ನನ್ನ ಜಗವೇ ನೀನೇ
ನೀನೇ ನೀನೇ ನನ್ನ ಉಸಿರು ನೀನೇ