Kanda歌词由THULASI BALLUR&DEEKSHIKA DEEPU&Sky Subbu&SRIVATHSA KR&Inchara Murthy演唱,出自专辑《Kanda》,下面是《Kanda》完整版歌词!
Kanda歌词完整版
ತೊಟ್ಟಿಲ ಬಟ್ಟಲೊಳಗೆ
ಬೆಚ್ಚಗೆ ಮಲಗಿಸಲು
ತೂಗುವೆ ತಂಗಾಳಿ ಬೀಸುತ್ತಲೇ
ಅತ್ತಿತ್ತ ಅಂಬೆಗಾಲ
ನೀ ಇಟ್ಟು ಬರಲೆನ್ನ
ಕೈ ಚಾಚಿ ಮುಂದಕ್ಕೆ ಕರೆದಂತೆ ನೀ
ಕಂದ.... ನಿನ್ ಅಪ್ಪುಗೆಯಲಿ
ಜಗವನ್ನೇ ಮರೆತಂತೆ ನಾನು
ಏನೋ ನೀ ನಗುತಿರಲು
ಬೆಳಕನ್ನೇ ಮರೆತಂತೆ ಹಗಲು
ಅಮ್ಮ ಎಂದು ನೀ ಕರೆದಾಗ
ನಗುತಲೇ ನಿನ್ನನು ನೆನೆದಾಗ
ಹೃದಯಕೆ ಉಸಿರಾಗಿಯೇ ಒರಗುವೆಯಾ
ಅಮ್ಮ ಎಂದು ನೀ ಕರೆದಾಗ
ಕೈ ತುತ್ತು ನಾನೀಗ ಕೊಡುವಾಗ
ಕಥೆಗಳ ಒಂದೊಂದೇ ಕೇಳುವೆಯಾ
ಕಂದ ನಿನ್ನ ಕಂಗಳಲಿ
ಕನಸುಗಳು ಕಾಣುತಿವೆ
ಅದ ನನಸು ಮಾಡಲು
ನನ್ನೀ ಜೀವ ತುಡಿಯುತಿದೆ ||
ಹೆಜ್ಜೆ ಹೆಜ್ಜೆಗೂ ಕಾಲ ಗೆಜ್ಜುಯು
ಸಪ್ಪಳ ಮಾಡಿ ಹೇಳುತಿವೆ
ನಿನ್ನ ನಗುವು ನನ್ನ ಬದುಕಿನ
ರೂಪ ರೇಷೆಯನು ಬದಲಿಸಿದೆ
ನೂರು ಜನ್ಮದ ಪುಣ್ಯ ನನ್ನದು
ಸ್ವರ್ಗವು ನಿನ್ನಲೇ ಕಾಣುತಿದೆ
ನನ್ನ ಎದೆಯಲಿ ಈಗ ನಿನ್ನಯ
ಪ್ರೇಮದ ರೆಕ್ಕೆಯು ಬಡಿಯುತಿದೆ
ಕೈ ತುತ್ತು ನಾನೀಗ ಕೊಡುವಾಗ
ಕಥೆಗಳ ಒಂದೊಂದೇ ಕೇಳುವೆಯಾ
ಅಮ್ಮ ಎಂದು ನೀ ಕರೆದಾಗ
ನಗುತಲೇ ನಿನ್ನನು ನೆನೆದಾಗ
ಹೃದಯಕೆ ಉಸಿರಾಗಿಯೇ ಒರಗುವೆಯಾ
ಅಮ್ಮ ಎಂದು ನೀ ಕರೆದಾಗ
ಕೈ ತುತ್ತು ನಾನೀಗ ಕೊಡುವಾಗ
ಕಥೆಗಳ ಒಂದೊಂದೇ ಕೇಳುವೆಯಾ