Payanisive Manasugalu歌词由Joe Costa&K Kalyan&Nakul Abhyankar演唱,出自专辑《Hondisi Bareyiri - Karaoke》,下面是《Payanisive Manasugalu》完整版歌词!
Payanisive Manasugalu歌词完整版
ಪಯಣಿಸಿವೆ ಮನಸುಗಳು (Male)
ಪಯಣಿಸಿವೆ ಮನಸುಗಳು
ಸವೆಯೋ ದಾರಿ,
ಹಸಿದಾ ಹಸಿ ನೆನಪುಗಳು.!
ನೆನಪುಗಳೇ ಹೀಗೆ,…
ಬಿಟ್ಟು ಬಿಡದಾ, ಜ್ವರದಾ ಹಾಗೆ..!!
ಒಡೆದ ಮನಸುಗಳಲಿ ಕಡೆವ
ನೂರು ಭಾವನೇ..,
ಸರಪಳೀಯ ಒಳಗೆ
ಸ್ವಾತಂತ್ರ್ಯ ಕಲ್ಪನೇ.. (ಪಲ್ಲವಿ)
ಕಾಣದ ನೋವುಂಟು ಎಲ್ಲರೆದೆಯಲಿ !
ಬಾಡಿಗೆ ಸಂತೋಷ ಎಲ್ಲರೆದುರಲಿ, !!
ಹೊಂದಿಕೊಂಡು ಬಾಳುವುದಕೆ ಹತ್ತು ಗಲಿಬಿಲಿ !
ಇಬ್ಬನಿಯಾ ಬೇಲಿ !!
ಬಿಸೋ ತಂಪು ಗಾಳಿ !,
ಭರವಸೆಗಳ ಲಾಲಿ,
ಒಳ್ಳೆ ನಾಳೆಗಳಿಗೆ ಒಂದು ಆಮಂತ್ರಣಾ!
ನೆಲದ ತುಂಬ ಹಸಿರೂ,,
ಮುಗಿಲ ಚಂದದುಸಿರೂ,,
ಹೃದಯಗಳಲಿ ಕಾಣಬಹುದೆ ಸಮ್ಮೇಳನಾ.?!
ಅರಳುತಿರುವ ಆಶಾಭಾವನೇ,,
ನಿಲ್ಲದಿರಲಿ ಎಲ್ಲೂ ಸುಮ್ಮನೆ..!
ಅವನು ಅವಳಿಗಿವನಿಗರಲಿ
ಒಂದೆ ಯೋಚನೆ !
ಎಲ್ಲ ಆಗುಹೋಗುಗಳಿಗೂ
ಕಾಲವೇ ಹೊಣೆ !!
ಕಾಣದ ನೋವುಂಟು ಎಲ್ಲರೆದೆಯಲಿ !
ಬಾಡಿಗೆ ಸಂತೋಷ ಎಲ್ಲರೆದುರಲಿ, !!
ಹೊಂದಿಕೊಂಡು ಬಾಳುವುದಕೆ ಹತ್ತು ಗಲಿಬಿಲಿ !
ಇಬ್ಬನಿಯಾ ಬೇಲಿ !!