Belakali歌词由Joe Costa&Ramenahalli Jagannatha演唱,出自专辑《Hondisi Bareyiri (Original Motion Picture Soundtrack)》,下面是《Belakali》完整版歌词!
Belakali歌词完整版
ಬೆಳಕಲಿ..(Male)
ಬೆಳಕಲಿ ಕಾಣದ ಇರುಳಿಗೂ
ಇರುಳಲಿ ಕಾಣುವ ಬೆಳಕಿಗೂ
ಆ ನಭ ಕೂಡ ಕಣ್ಮುಚ್ಚಿ ನೋಡುತ್ತಿರುವ ಸಮಯ
ಈ ಭವ ಕೂಡ ಕಣ್ಣೆತ್ತಿ ನೋಡುತ್ತಿರುವ ವಿಷಯ
ಬೆಳಕಲಿ ಕಾಣದ ಇರುಳಿಗೂ
ಇರುಳಲಿ ಕಾಣುವ ಬೆಳಕಿಗೂ..
ನಿನ್ನ ಬದುಕೆ
ನೆನ್ನೆಗಳಿಗೂ-ನಾಳೆಗಳಿಗೂ ಉತ್ತರವೂ
ಸಹಜ ಬದುಕ
ಸ್ವೀಕರಿಸೋ ರೂಪವು..
ಇನ್ನು ಹೀಗೆ ನಿನ್ನಾ ಹಾಗೆ
ನನ್ನಾ ದಿನಚರಿ ಶುಭಾರಂಭವು
ಈ ಹೆಣ್ಣು ಪೂಜಿಸೋ
ಈ ನೆಲೆದ ಗುಣಕೆ ಇವಳೇ ಕಾಣಿಕೆ
ಬೆಳಕಲಿ ಕಾಣದ ಇರುಳಿಗೂ
ಇರುಳಲಿ ಕಾಣುವ ಬೆಳಕಿಗೂ..
ಕಾಲದ ಕನ್ನಡಿಯಲಿ
ಕಾಣದ ಮುನ್ನುಡಿ ತಂದ ಬೆಳಕಿಗೆ
ಕಡಲಲೆಯಲಿ ಗಿರಿ-ತೊರೆಯಲಿ ನಭ-ನೆಲದಲಿ
ಝೇಂಕಾರವು..
ಕೋರಸ್
ಸೃಷ್ಠಿ ಬೆಸೆದ ಈ ಅನುಬಂಧಕೀಗ
ಬೇಕಿಲ್ಲ ಯಾವ ಹೆಸರು..
ಬದುಕಿ ಸುಮ್ಮನೆ…