Naguvenu歌词由Surendranath B R演唱,出自专辑《Naguvenu》,下面是《Naguvenu》完整版歌词!
Naguvenu歌词完整版
ನಗುವೆನು ನಗುವೆನು ನೋವಲೂ ನಗುವೆನು
ಕಳೆದಿರೋ ನಗುವನು ಹುಡುಕುತ ನಗುವೆನು
ದೂರ ಆದರೆಲ್ಲ ಇಲ್ಲ ನಂಗೆ ಯಾರು
ಚೂರೇ ಚೂರು ಹೇಳಿ ನಂದು ಯಾವ ಊರು
ಕೂಗಿ ಕರೆದರು ಕಾಲು ಮುಗಿದರೂ
ಮೌನೀ ಕಲ್ಲು ದೇವರು
II ನಗುವೆನು....II
ಪರದೆಯ ಸರಿಸುತ ನೆನಪನು ಅಳಿಸುತ
ಬರೆಯಲು ಕುಳಿತೆನು ಬದುಕಿನ ಹೊಸ ಪುಟ
ಕನಸಿನ ತೇರಿಗೆ
ಸಿಡಿಲಿದು ಸೋಕಿದೆ
ವಿರಹದ ಬೇಸಿಗೆ
ಒಲವನೆ ಕೊಂದಿದೆ
ನೋವಿನಲ್ಲಿಯೇ ಜೀವ ಇಲ್ಲಿಯೇ
ನಿಂತೇ ಹೋದರು ಕೇಳುವವ ರ್ಯಾರು
ll ನಗುವೆನು....ll
ಕನಸಿನಾ ಅರಮನೆ ಕರಗಿದೆ ಎದುರಲೆ
ಕಳೆದಿರೋ ಕನಸನೂ ಹುಡುಕಲೆ ಕನಸಲೆ
ಮರೆಯದ ನೋವಿಗೆ
ಕೊಡುವೆಯ ಕಾಣಿಕೆ
ಬರೆಯದ ಹಾಡಿಗೆ
ಕೊಡುವೆಯ ಶೀರ್ಷಿಕೆ
ನೋವು ಒಂಥರಾ ದೇವರಾ ವರಾ
ಬೇಡ ಅನ್ನಲೂ ಇಲ್ಲ ಅಧಿಕಾರ
II ನಗುವೆನು II